Gulbarga University, Kalaburagi

Click here for
Online Payment

Vidyeye Amrutha

Translates as "Education is Nector"

☰ MENU

Vice-Chancellor's Desk


Prof. S. R. Niranjana,
Ph.D.,FNAAS.,FNABS.,FISMPP.
Vice Chancellor

ಗುಲಬರ್ಗಾ ವಿಶ್ವವಿದ್ಯಾಲಯವು ಬೀದರ, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಹಿಂದುಳಿದ ಪ್ರದೇಶವೆನಿಸಿದ ಹೈದ್ರಾಬಾದ ಕರ್ನಾಟಕದಲ್ಲಿರುವ ಈ ವಿಶ್ವವಿದ್ಯಾಲಯ ಅರಿವು, ಅಧ್ಯಯನ, ಸಂಶೋಧನೆ ಮತ್ತು ಪ್ರಸಾರದ ಮೂಲಕ ಮರುಭೂಮಿಯಲ್ಲಿರುವ ಫಲವತ್ತಾದ ಪ್ರದೇಶದಂತಿದೆ. ಮಾತ್ರವಲ್ಲ, ಗುಣಾತ್ಮಕ ಸಾಮಾಜಿಕ ಪರಿವರ್ತನೆ, ಅಭಿವೃದ್ಧಿಸಾಧನ, ಸಮಷ್ಟಿಹಿತ ಹಾಗೂ ಸುಸ್ಥಿರ ಬೆಳವಣಿಗೆಯ ದ್ಯೋತಕವಾಗಿ ಮೂಡಿಬಂದಿದೆ. ಉನ್ನತ ಶಿಕ್ಷಣದಲ್ಲಿ ಉತ್ಕøಷ್ಟತೆ, ಜ್ಞಾನದ ಮೂಲಕ ಸಬಲೀಕರಣ, ಸಮಾಜೋ - ಧಾರ್ಮಿಕ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಸಮಷ್ಟಿಹಿತ ಸಾಧನೆಯ ಬೆಳವಣಿಗೆಗಳೆಂಬ ವಿಶ್ವವಿದ್ಯಾಲಯದ ದೂರದೃಷ್ಟಿಯಿಂದ ಮಾರ್ಗದರ್ಶನಗೊಂಡು, ತನ್ನ ಧ್ಯೇಯಗಳಾದ ಸಮಾನತೆ, ನ್ಯಾಯ, ಸಾಮರಸ್ಯ ಮತ್ತು ಅಭಿವೃದ್ಧಿಗಳಿಗೆ ಬದ್ದವಾಗಿದ್ದುಕೊಂಡು, ತನ್ನ ಇರವಿನ ಗುರಿಯನ್ನು ಮತ್ತು ತನ್ನ ಹುಟ್ಟಿಗೆ ಕಾರಣರಾದವರ ಆಶೋತ್ತರಗಳನ್ನು ಈಗಾಗಲೆ ಪೂರೈಸಿದೆ.

ವಿಶ್ವವಿದ್ಯಾಲಯವು 860 ಏಕ್ರೆ ವಿಸ್ತಾರವಾದ ಭೂಭಾಗವನ್ನು ಹೊಂದಿದ್ದು ಮರಗಿಡಗಳು ಮತ್ತು ನೀರಿನಾಶ್ರಯದಿಂದ ಕೂಡಿ ಸೊಗಸಾಗಿದೆ. 35 ವರ್ಷಗಳ ತನ್ನ ಅರ್ಥಪೂರ್ಣ ಅಸ್ತಿತ್ವ ಹಾಗೂ ಸ್ಥಿರವಾದ ಬೆಳವಣಿಗೆಗಳ ಮೂಲಕ ಕಲಿಕಾ ಪ್ರಪಂಚ, ವಿಜ್ಞಾನ ಮತ್ತು ಸಾಹಿತ್ಯದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ. ವಿವಿಧ ವಿಭಾಗಗಳಲ್ಲಿ ನಡೆಯುವ ಸಂಶೋಧನೆಗಳು ಆಯಾ ಕ್ಷೇತ್ರಗಳಲ್ಲಿ ವಿಶಿಷ್ಟವಾದ ಕೊಡುಗೆಗಳನ್ನೀಯುತ್ತ ಜ್ಞಾನದ ಕ್ಷಿತಿಜಗಳನ್ನು ವಿಸ್ತ್ರತಗೊಳಿಸಿವೆ. ಜೊತೆಗೆ ವಿಶ್ವವಿದ್ಯಾಲಯವು ತನ್ನಲ್ಲಿನ ಜ್ಞಾನದ ಪ್ರಯೋಜನವನ್ನು ತನ್ಮೂಲಕ ತನ್ನ ಇರವನ್ನು ಗುಣಾತ್ಮಕವಾಗಿ ಪ್ರಕಟಪಡಿಸಿದೆ. ಪರಿಸರ ಅಧ್ಯಯನ ವಿಭಾಗದ ಸ್ಥಾಪನೆ, ನೂರು ಎಕ್ರೆಗಳಲ್ಲಿ ಹರಡಿರುವ ಬಯೋ ಡಿಸೆಲ್ ಪಾರ್ಕ ಹಾಗೂ ಬಯೋ ಡಿಸೆಲ್ ಉತ್ಪಾದನಾ ಘಟಕ, ಎರೆಹುಳ ಗೊಬ್ಬರ ಘಟಕ, ಪ್ರಮಾಣ ಮತ್ತು ಪರಿಣಾಮಗಳಲ್ಲಿ ಚಿರಸ್ಥಾಯಿಯೆನಿಸಬಹುದಾದ ಮತ್ತು ಈಗಾಗಲೆ ಅಮೇರಿಕ ಸಂಯುಕ್ತ ಸಂಸ್ಥಾನದ ಕೊಲರೊಡೊ ಸ್ಟೇಟ್ ವಿಶ್ವವಿದ್ಯಾಲಯ, ಫೋರ್ಟ ಕೊಲಿನ್ಸಿ (CS) ಜೊತೆ ಡಿಸೆಂಬರ್ 2011ರಲ್ಲಿ ಒಡಂಬಡಿಕೆ (MOU) ಮಾಡಿರುವ ಉದ್ದೇಶಿತ ಇಂಟರನ್ಯಾಶನಲ್ ಇನ್‍ಸ್ಟಿಟ್ಯೂಟ್ ಫಾರ್ ಪುಡ್, ಎನರ್ಜಿ ಅ್ಯಂಡ್ ವಾಟರ್ ಸೆಕ್ಯೂರಟಿ (IIFEWS) ಇದರ ಸ್ಥಾಪನೆ, ಯೂರೋಪಿಯನ್ ಕಮಿಷನ್‍ನ ವ್ಯಾಪ್ತಿಯಲ್ಲಿರುವ ವಿಶ್ವವಿದ್ಯಾಲಯಗಳೊಡನೆ ಇರೆಸ್‍ಮಸ್ ಮುಂಡಾಸ್ (Erasmus Mundus) ನಡಿಯಲ್ಲಿ ಸ್ವಾಗತ ಮತ್ತು ಫ್ಯೂಜನ್ ಯೋಜನೆ ಜೊತೆ MOU ಮತ್ತು ವಲ್ರ್ಡ್ ಬಯೋಡೈರ್ವಸಿಟಿ ಕಾಂಗ್ರೇಸ್, ಥೈಲ್ಯಾಂಡ್ ಜೊತೆ IMOU - ಇವು ಕೆಲವು ವಿಶ್ವವಿದ್ಯಾಲಯದ ಹೆಜ್ಜೆಯ ಹೆಗ್ಗುರುತುಗಳು. ಮೂಲಭೂತ ಸೌಕರ್ಯ ಮತ್ತು ಸೌಲಭ್ಯಗಳಲ್ಲಿ ತನ್ನೋರಗೆಯ ವಿಶ್ವವಿದ್ಯಾಲಯಗಳಿಗಿಂತ ಮುಂಚೂಣಿಯಲ್ಲಿದೆ ಮನೋರಂಜನಾ ವ್ಯವಸ್ಥೆ ಹಾಗೂ ಕೇಂದ್ರಿಯ ಸೌಲಭ್ಯಗಳಾದ ಗ್ರಂಥಾಲಯ, ವಸತಿನಿಲಯಗಳು, USIC, ಆರೋಗ್ಯಕೇಂದ್ರ, ಗಣಕಯಂತ್ರ ಕೇಂದ್ರ, ಭಾಷಾ ಪ್ರಯೋಗಾಲಯ ಮತ್ತು ಬಹುಮಾಧ್ಯಮ ಉತ್ಪಾದನಾ ಕೇಂದ್ರಗಳು ಒಂದು ಕಲಾ ಜಗತ್ತನ್ನೇ ಸೃಷ್ಟಿಸಿವೆ. ವಿಭಾಗಗಳಲ್ಲಿನ ಮಾನವ ಸಂಪನ್ಮೂಲ ಹಾಗೂ ಸಂಶೋಧನಾ ಫಲಶ್ರುತಿಗಳು ಅತ್ಯುತ್ತಮವಾಗಿದ್ದು ಶುದ್ಧ ಜ್ಞಾನ ಹಾಗೂ ಆನ್ವಯಿಕ ಸಂಶೋಧನೆಗಳ ಕೇಂದ್ರಗಳಾಗಿವೆ. ಎಂತಲೇ ಶಿಕ್ಷಣದ ಪರಮ ಗುರಿಗಳಾದ ಶೈಕ್ಷಣಿಕ ಸುಸಮೃದ್ಧಿ ಮತ್ತು ಬೌದ್ಧಿಕ ಉಪಯುಕ್ತತೆಗಳನ್ನು ಒದಗಿಸುತ್ತಿರುವ ಈ ವಿಶ್ವವಿದ್ಯಾಲಯದತ್ತ ಎಲ್ಲರ ದೃಷ್ಟಿ ಕೇಂದ್ರೀಕೃತವಾಗಿದೆ.

"ವಿದ್ಯೆಯೇ ಅಮೃತ" ಎಂಬ ಧ್ಯೇಯವಾಕ್ಯವು ವಿಶ್ವವಿದ್ಯಾಲಯದ ಪರಮೋದ್ದೇಶವನ್ನು ಸಾರುತ್ತದೆ. ಈ ವಿವರಣ ಪತ್ರಿಕೆ (Prospectus)ಯು ವಿಶ್ವವಿದ್ಯಾಲಯದಲ್ಲಿನ ಅಧ್ಯಯನ, ಸಂಶೋಧನೆ ಹಾಗೂ ಅಭಿವೃದ್ಧಿಪರ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ತಿಳಿಸುತ್ತದೆ.

ವಿದ್ಯಾರ್ಥಿ ಸಮುದಾಯಕ್ಕೆ ಉಜ್ವಲ ಭವಿಷ್ಯವನ್ನು ಕೋರುತ್ತ ಅವರಿಗೆ ಉತ್ತಮ ಅವಕಾಶಗಳು ಲಭಿಸಲಿ ಎಂದು ಹಾರೈಸುತ್ತೇನೆ.

 

Gulbarga University has the jurisdiction over four districts viz. Bidar, Kalaburagi, Raichur and Yadagiri. Looked upon as an oasis of knowledge, wisdom and learning, research and extension in an otherwise backward or barren region of Hyderabad Karnataka, it has emerged as a harbinger of positive social transformation, an instrument of progress, and a vehicle of inclusive and sustainable growth. Guided by its vision of excellence in higher education, empowerment through knowledge, inclusive growth for socioeconomic transformation and sustainable development, and wedded to the mission of equity, justice, harmony and progress, the University has far exceeded the benchmark it had set for itself to achieve at its inception and the expectations of those who were instrumental in its establishment.

The University has a sprawling green campus of 860 acres, blessed and bestowed with vegetation and water only a few campuses can dream of. The University in its course of meaningful existence and steady growth during the last thirty two years has carved a niche for itself in the world of learning on the one hand and world of science and literature on the other. The research that is being carried out in all the disciplines is in the frontier and applied areas of their respective domains, representing what is known as the cutting edge of horizon of knowledge. At the same time, the extension engaged in by us has enabled us to take the campus to the community and put knowledge, scholarship and wisdom available with us to meet the immediate needs of the community around and tackle the problems of society at large and thereby make its positive presence felt by the people who come in our contact. Establishment of the PG Department of Environment studies, Bio Diesel Park, laid on hundred acres with Bio Diesel production plant, a Vermi Compost unit which is already operational, proposed establishment of International Institute for Food, Energy and Water Security, that could be termed as monumental in scale and impact for which an IMOU has been signed with the Colorado State University, USA last December 2011. MOU with universities of European Commission under Erasmus Mundus Svagata and FUSION Project, IMOU at World Biodiversity Congress, Thailand are some of the landmarks that the University is proud of. In terms of infrastructure and facility, the University is way ahead of its contemporaries and on par with the oldest of the Universities in the State. Academic, residential, sports and recreation structures and central facilities like Library, Hostels, USIC, Health Centre, Computer Centre, Language Lab, Multimedia Production Centre are housed and equipped good enough to be called the state of the art. The human resources and research output of our departments is enviable by any standard, owing to which it is being looked upon as the most fertile breeding ground for pure knowledge and applied research. Owing to these traits, the University is looked upon as a sought after destination for an academically enriching and intellectually rewarding experience, the twin benefits that true education and for that matter through education an ideal University stands and strives for.

“ವಿದ್ಯೆಯೇ ಅಮೃತ” conveys the spirit of the University. The University Prospectus provides information regarding the teaching, research and developmental activities in the University for the benefit of student community.

I wish a bright future for the student community.
Best wishes to all.

Prof. S. R. Niranjana, Ph.D.,FNAAS.,FNABS.,FISMPP.
Vice Chancellor